01/ SERVICES

ನೀವು ನಮ್ಮ ಸಹಕಾರಿ ಸಂಸ್ಥೆಯಲ್ಲಿ
ಠೇವಣಿ ಹಾಗೂ ಸಾಲ ಸೌಲಭ್ಯಗಳನ್ನು
ಪಡೆಯಬಹುದಾಗಿದೆ

02/ MEMBERS RELIEF FUND

ನೀವು ನಿಮ್ಮ ಸದಸ್ಯರ ಜೀವಗಳನ್ನು
ಸುರಕ್ಷಿತಗೊಳಿಸಲು ಕೈಗೆಟಕುವಂತಹ
ಯೋಜನೆ

03/ BRANCHES

ಉ.ಕ ಜಿಲ್ಲೆಯಲ್ಲಿ 14, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 2 ಶಾಖೆಗಳನ್ನು ತೆರೆದು ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದಿದೆ.

2023 - 2024 ನೇ ಸಾಲಿಗೆ ರೂ 2.36 ಕೋಟಿ ನಿವ್ವಳ ಲಾಭ, ಶೇ 10 ಡಿವಿಡೆಂಡ್ ಘೋಷಣೆ -ಜಿ.ಜಿ. ಶಂಕರ, ಅಧ್ಯಕ್ಷರು || ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೊಡಮಾಡುವ ಉತ್ತಮ ಸಹಕಾರಿ ಪ್ರಶಸ್ತಿಗೆ ನಮ್ಮ ಸಹಕಾರಿಯ ಅಧ್ಯಕ್ಷರಾದ ಮಾನ್ಯ ಶ್ರೀ ಜಿ ಜಿ ಶಂಕರ ಅವರು ಆಯ್ಕೆ ಆಗಿದ್ದಾರೆ. || ಭಾನುವಾರ, ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲಾ ಸರ್ಕಾರಿ ರಜಾ ದಿನಗಳು ಸಂಸ್ಥೆಗೆ ರಜೆ ಇರುತ್ತದೆ.

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಹೊನ್ನಾವರ

ಜಿಲ್ಲೆಯ ಹೆಮ್ಮೆಯ ಉದಯೋನ್ಮುಖ ಸಹಕಾರಿ ಸಂಸ್ಥೆಯಾಗಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಪ್ರಧಾನ ಕಛೆರಿ, ಹೊನ್ನಾವರ ದಿನಾಂಕ 12/12/2011ರಲ್ಲಿ ಆರಂಭಗೊಂಡು ಉತ್ತಮ ಜನಪರ ಸಂಸ್ಥೆಯೆಂದು ಪ್ರಖ್ಯಾತಿ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹತ್ತು ಶಾಖೆಗಳನ್ನು ತೆರೆದು ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಗೈದಿದೆ.


Members Relief Fund

ಜೀವನ ಮೌಲ್ಯ ನಿಧಿ

ಇದು ಸದಸ್ಯರ ಮರಣೋತ್ತರ ಪರಿಹಾರ ನೀಡುವ ಯೋಜನೆಯಾಗಿರುತ್ತದೆ.

ಜನತಾ ವೈಯಕ್ತಿಕ ಅಪಘಾತ ಪರಿಹಾರ ಯೋಜನೆ

ಖಾತೆಯ ಕನಿಷ್ಠ ಶಿಲ್ಕು ರೂ.1,000/- (ರೂಪಾಯಿ ಒಂದು ಸಾವಿರ ಮಾತ್ರ)


ಅಗಷ್ಟ 10, 2023 ಕ್ಕೆ ಇದ್ದಂತೆ

(1) ಜೆಪಿಎ ಪರಿಹಾರ ಯೋಜನೆ ಮುಖಾಂತರ ಸಹಕಾರಿಯು ಇಲ್ಲಿಯವರೆಗೆ ಒಟ್ಟೂ 21,919 ಸದಸ್ಯರಿಗೆ ರೂಪಾಯಿ 219 ಕೋಟಿ 19 ಲಕ್ಷದಷ್ಟು ಉಚಿತವಾಗಿ ಪರಿಹಾರ ಭದ್ರತೆಗೆ ಒಳಪಡಿಸಿರುತ್ತದೆ. ಅಲ್ಲದೇ ಅಪಘಾತದಿಂದ ಮರಣ ಹೊಂದಿದ 5 ಸದಸ್ಯರ ರೂ5,00,000/- ಮರಣೋತ್ತರ ಪರಿಹಾರ ನೀಡಿದ್ದು ಇರುತ್ತದೆ. ಈ ರಕಂನಲ್ಲಿ ರೂ.1,50,271/- ಮೃತ ಸದಸ್ಯರ ಸಾಲಬಾಕಿಗೆ ಮತ್ತು ರೂ.3,49,729/- ಮೃತ ವಾರಸುದಾರರಿಗೆ ನೀಡಲಾಗಿದೆ.


(2) ಜೀವನಮೌಲ್ಯ ಯೋಜನೆಗೆ ಒಟ್ಟೂ 22,720 ಸದಸ್ಯರು ಒಳಪಟ್ಟಿದ್ದು, ಇಲ್ಲಿಯವರೆಗೆ ಒಟ್ಟೂ 110 ಸದಸ್ಯರ ರೂ.53,64,627/- ಮರಣೋತ್ತರ ಪರಿಹಾರ ನೀಡಿದೆ. ಈ ರಕಂನಲ್ಲಿ ರೂ.34,62,274/- ಮೃತ ಸದಸ್ಯರ ಸಾಲಬಾಕಿಗೆ ಮತ್ತು ರೂ.19,02,353/- ಮೃತ ವಾರಸುದಾರರಿಗೆ ನೀಡಲಾಗಿದೆ.


ಕ್ಯಾಲೆಂಡರ್


ಕ್ಯಾಲೆಂಡರ್ - 2025


ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 18 ಶಾಖೆಗಳು

Contact Us