ಸುದ್ದಿ ಮಾಹಿತಿ


#
#

ಇಂದು ಸೇಫ್ ಸ್ಟಾರ್ ಸೌಹಾರ್ದ ಸಹಕಾರಿಯ 18ನೇ ಶಾಖೆ ತ್ರಾಸಿ ಶಾಖೆಗೆ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಶ್ರೀ ಮಂಜುನಾಥ್ ರವರು ಹಾಗೂ ಸೌಹಾರ್ದ ಸಹಕಾರಿಯ ಅಭಿವೃದ್ಧಿ ಅಧಿಕಾರಿ ಶ್ರೀ ವಿಜಯ ಸರ್ ಅವರು ಭೇಟಿ ನೀಡಿದ್ದರು. ಸಹಕಾರಿಯ ಪರವಾಗಿ ಹಾಗೂ ಶಾಖೆಯ ಪರವಾಗಿ ಶ್ರೀಯುತರನ್ನು ಪುಷ್ಪಗುಚ್ಚ ನೀಡಿ ಶಾಲು ಹೊದಿಸಿ ಶಾಖೆಯ ವ್ಯವಸ್ಥಾಪಕರಾದ ಮಧುಕರ್ ಗೌಡ ರವರು ಗೌರವವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್ ರವರು ಸಹಕಾರಿಯು ಉತ್ತಮವಾಗಿ ಬೆಳೆಯುತ್ತಿರುವ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಸಹಕಾರಿಯ ಮಾನ್ಯ ಅಧ್ಯಕ್ಷರಾದ ಶ್ರೀಯುತ ಜಿ.ಜಿ .ಶಂಕರ್ ಸರ್ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು. ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಬ್ಬಂದಿಗಳು ಕೋ ಆರ್ಡಿನೇಟರ್ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

#
#
#

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಹೊನ್ನಾವರ ಇದರ 18ನೇ ಶಾಖೆಯು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ಜನವರಿ 26ರಂದು ಲಕ್ಷ್ಮೀ ಪೂಜೆಯೊಂದಿಗೆ ಶುಭಾರಂಭಗೊಂಡಿತು. ರಾಷ್ಟ್ರೀಯ ಹೆದ್ದಾರಿ 66ರ ಐಡಿಯಲ್ ಟವರ್ ಹತ್ತಿರದ ವಜ್ರಾಕ್ಷಿ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ನೂತನ ಶಾಖೆ ಆರಂಭಗೊಂಡಿದ್ದು ಸಹಕಾರಿಯ ಅಧ್ಯಕ್ಷರಾದ ಜಿ.ಜಿ.ಶಂಕರ ಉದ್ಘಾಟಿಸಿದರು.


ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ...
#
#
#

2025 ರ ಡೈರಿ ವಿತರಣೆ

ಇಂದು ನಮ್ಮ ಸಹಕಾರಿಗೆ ಸಂಯುಕ್ತ ಸಹಕಾರಿಯ ಜಿಲ್ಲಾ ನಿರ್ದೇಶಕರು ಕೆಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರು ಸಹಕಾರಿ ಭಾರತಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಶ್ರೀಯುತ ಮೋಹನ್ ದಾಸ್ ನಾಯಕ ಸರ್ ರವರು ಹಾಗು ಭಟ್ಕಳ ಸೌಹಾರ್ದ ಅಧ್ಯಕ್ಷರು, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶ್ರೀನಿವಾಸ್ ನಾಯ್ಕ ಸರ್ ಅವರು ಸಹಕಾರಿಗೆ ಆಗಮಿಸಿದ್ದರು.ಸಹಕಾರಿಯ ಮಾನ್ಯ ಅಧ್ಯಕ್ಷರು ಆತ್ಮೀಯವಾಗಿ ಬರಮಾಡಿಕೊಂಡು 2025 ರ ಡೈರಿ ನೀಡಿದರು. ಈ ಸಂದರ್ಭದಲ್ಲಿ ವಿ ಕೆರ್ ಸೌಹಾರ್ದದ ಸ್ಟಿಫನ ,ಸುಪ್ರೀತ್ ಸೌಹಾರ್ದದ ಹೊರ್ಟಾ ,ಯಧುವೀರ್ ಸೌಹಾರ್ದ ದ ಶ್ರೀಕಾಂತ್ ನಾಯ್ಕ್ ಉಪಸ್ಥಿತರಿದ್ದರು. ನಮ್ಮ ಸೌಹಾರ್ದ ದಿಂದ ಮಾನ್ಯ ಅಧ್ಯಕ್ಷರಾದ ಜಿ ಜಿ ಸರ್ ನಿರ್ದೇಶಕರಾದ ಲಿಫರ್ಡ ಸರ್ ಜಿ ಆರ್ ಹೆಗಡೆ ಸರ್ ಪ್ರ ಕ ದಿಂದ ಜಿ ಮ್ ಮಹೇಶ ಶೆಟ್ಟಿ ಎ ಜಿ ಮ್ ಎಡ್ವಿನ್ ಸರ್ ಉಪಸ್ಥಿತ ರಿದ್ದರು.

#
#
#
#

25ನೇ ವರ್ಷದ ರಜತ ಮಹೋತ್ಸವ ವರ್ಷ ದ ಆಚರಣೆ

ಹೊನ್ನಾವರ ಶಾಖೆ ಹಾಗೂ ಪ್ರಧಾನ ಕಚೇರಿ ಯಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದ 25ನೇ ವರ್ಷದ ರಜತ ಮಹೋತ್ಸವ ವರ್ಷ ದ ಆಚರಣೆಯನ್ನು ಸೌಹಾರ್ದ ಸಹಕಾರಿಯ ದ್ವಜಾರೋಹಣ ಮಾಡುವ ಮುಖೇನ ಸೌಹಾರ್ದ ಸಹಕಾರಿ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ.ಜಿ ಶಂಕರ ಸರ್ ರವರು ಹಾಗೂ ಜಿ.ಎಂ ಮಹೇಶ ಶೆಟ್ಟಿ, ಎ ಜಿ ಎಂ ಎಡ್ವಿನ್ ರೆಬೆಲ್ಲೋ ಸರ್, ಚೀಫ್ ಮ್ಯಾನೇಜರ್ ವಸಂತ ನಾಯ್ಕ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

#
#
#
#

ಸೇಫ್ ಸ್ಟಾರ್ ಸೌಹಾರ್ದ ಮಂಕಿ ಶಾಖೆ ನೂತನ ಕಾರ್ಯಾಲಯ ಉದ್ಘಾಟನೆ

ಹೊನ್ನಾವರ ತಾಲೂಕಿನ ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎದುರಿನ “ಮಾತೃಕೃಪಾ” ಕಟ್ಟಡದ 1ನೇ ಮಹಡಿಯಲ್ಲಿ ಸೇಫ್ ಸ್ಟಾರ್ ಸೌಹಾರ್ದ ಇದರ 11ನೇ ಶಾಖೆಯು ಲಕ್ಷ್ಮೀ ಪೂಜೆಯೊಂದಿಗೆ ಶುಭಾರಂಭವಾಯಿತು.

#
#
#
#
#

ಪ್ರಧಾನ ಕಛೇರಿಯಲ್ಲಿ ಪ್ರಗತಿ ಪರಿಶೀಲನೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಪ್ರಧಾನ ಕಛೇರಿಯಲ್ಲಿ ಎಲ್ಲಾ ಶಾಖಾ ವ್ಯವಸ್ಥಾಪಕರುಗಳಿಗೆ ಪ್ರಗತಿ ಪರಿಶೀಲನೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಮಾನ್ಯ ಅಧ್ಯಕ್ಷರು ಸಾಲ ವಸೂಲಾತಿ ಹಾಗು ಸಾಲ ನೀಡುವಿಕೆ,ಉತ್ತಮ ನಾಯಕತ್ವ ಗಳ ವಿಷಯದ ಬಗ್ಗೆ ಉತ್ತಮ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಹಕಾರಿ ನಿರ್ದೇಶಕರು ಪ್ರಧಾನ ಕಚೇರಿಯ ಅಧಿಕಾರಿಗಳು ಹಾಗೂ ಶಾಖೆಗಳಿಂದ ಆಗಮಿಸಿದ ವ್ಯವಸ್ಥಾಪಕರು ಉಪಸ್ಥಿತರಿದ್ದು ಕಾರ್ಯಕ್ರಮ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

#
#
#
#

ಪ್ರಧಾನ ಕಛೇರಿಯಲ್ಲಿ ಪ್ರಗತಿ ಪರಿಶೀಲನೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಇಂದು ಪ್ರಧಾನ ಕಛೇರಿಯಲ್ಲಿ ಕೋ-ಆರ್ಡಿನೇಟರ್, ಹಾಗೂ ಫೀಲ್ಡ್ ಆಫೀಸರ್ 2 ಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಮಾನ್ಯ ಅಧ್ಯಕ್ಷರು ಸಾಲ ವಸೂಲಾತಿ ಹಾಗು ಸಾಲ ನೀಡುವಿಕೆಗಳ ಬಗ್ಗೆ ಉತ್ತಮ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಹಕಾರಿ ನಿರ್ದೇಶಕರು ಪ್ರಧಾನ ಕಚೇರಿಯ ಅಧಿಕಾರಿಗಳು ಹಾಗೂ ಶಾಖೆಗಳಿಂದ ಆಗಮಿಸಿದ ಕೋರ್ಡಿನೇಟರ್ ಫೀಡ್ ಆಫೀಸರ್ಗಳು ಉಪಸ್ಥಿತರಿದ್ದರು.

#
#
#

ಸೇಫ್ ಸ್ಟಾರ್ ಸೌಹಾರ್ದ ಶಿರಸಿ ಶಾಖೆ ನೂತನ ಕಾರ್ಯಾಲಯ ಉದ್ಘಾಟನೆ

ಶುಭಾರಂಭ 08 ನವಂಬರ್, 2024

ಶಿರಸಿ ಪಟ್ಟಣದ ಝೂ ಸರ್ಕಲ್ ಹತ್ತಿರ ಚೌಕಿಮಠದ "ಶ್ರೀಗುರುಪ್ರಸಾದ" ಕಟ್ಟಡದ 1ನೇ ಮಹಡಿಯಲ್ಲಿ ಸೇಫ್ ಸ್ಟಾರ್ ಸೌಹಾರ್ದ ಇದರ 5ನೇ ಶಾಖೆಯು ಸ್ಥಳಾಂತರಗೊಂಡು ಲಕ್ಷ್ಮಿ ಪೂಜೆಯೊಂದಿಗೆ ಶುಭಾರಂಭವಾಯಿತು.


ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ...
#
#
#

ಸೇಫ್ ಸ್ಟಾರ್ ಸೌಹಾರ್ದ ಗೋಕರ್ಣ ಶಾಖೆ ನೂತನ ಕಾರ್ಯಾಲಯ ಉದ್ಘಾಟನೆ

ಶುಭಾರಂಭ 10 ಅಕ್ಟೋಬರ್, 2024

ಗೋಕರ್ಣ ಗ್ರಾಮದ ಮೇಲಿನಕೇರಿ ಮುಖ್ಯರಸ್ತೆಯ ಕುಬೇರ ವಾಣಿಜ್ಯ ಮಳಿಗೆಯ 2ನೇ ಮಹಡಿಯಲ್ಲಿ ಸೇಫ್ ಸ್ಪಾರ್ ಸೌಹಾರ್ದ ಇದರ 3ನೇ ಶಾಖೆಯು ನೂತನ ಕಟ್ಟಡದಲ್ಲಿ ಲಕ್ಷ್ಮಿ ಪೂಜೆಯೊಂದಿಗೆ ಶುಭಾರಂಭವಾಯಿತು. ಸಹಕಾರಿಯ ಅಧ್ಯಕ್ಷರು ಶ್ರೀ ಜಿ. ಜಿ. ಶಂಕರ ನೂತನ ಕಟ್ಟಡ ಉದ್ಘಾಟಿಸಿ ಸಹಕಾರಿಯ ಗೋಕರ್ಣ ಶಾಖೆಯು ಇಂದು ನೂತನ ಕಟ್ಟಡದಲ್ಲಿ ಶುಭಾರಂಭಗೊಂಡಿದೆ.


ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ...
#
#
#

ಸೇಫ್ ಸ್ಟಾರ್ ಸೌಹಾರ್ದ ಯಲ್ಲಾಪುರ ಶಾಖೆ ನೂತನ ಕಟ್ಟಡದಲ್ಲಿ ಶುಭಾರಂಭ

ಶುಭಾರಂಭ 08 ಅಕ್ಟೋಬರ್, 2024

ಹೊನ್ನಾವರದಲ್ಲಿ ಪ್ರಧಾನ ಕಛೇರಿ ಹೊಂದಿರುವ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ೬ನೇ ಶಾಖೆ ಯಲ್ಲಾಪುರ ಪಟ್ಟಣದ ಸಂಕಲ್ಪ ಎದುರಿನ ಎಲ್.ಎಸ್.ಎಂ.ಪಿ ಸಹಕಾರಿ ಸಂಕೀರ್ಣದ ೨ನೇ ಮಹಡಿಯಲ್ಲಿ ನೂತನ ಕಟ್ಟಡದಲ್ಲಿ ಸ್ಥಳಾಂತರಗೊಂಡು ಲಕ್ಷ್ಮೀ ಪೂಜೆಯೊಂದಿಗೆ ಶುಭಾರಂಭವಾಯಿತು. ಯಲ್ಲಾಪುರ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಎಲ್.ಎಸ್.ಎಂ.ಪಿ ಇದರ ಅಧ್ಯಕ್ಷರಾದ ಶ್ರೀ ನಾಗರಾಜ ಕವಡಿಕೇರಿ ಅವರು ಭದ್ರತಾ ಕೊಠಡಿ ಉದ್ಘಾಟಿಸಿದರು.


ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ...
#
#
#

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ (ನಿ) ಸರ್ವ ಸದಸ್ಯರ ಸಭೆ

ಸರ್ವ ಸದಸ್ಯರ ಸಭೆ 18 ಆಗಸ್ಟ್, 2024

ದಿನಾಂಕ 18-8-2024 ರಂದು ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಸರ್ವ ಸದಸ್ಯರ ಸಭೆಯನ್ನು ಸಹಕಾರಿಯ ಅಧ್ಯಕ್ಷರಾದ ಜಿ ಜಿ ಶಂಕರರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.


ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ...
#
#
#

ಹಳದಿಪುರ ಶಾಖೆಯ 1ನೇ ವಾರ್ಷಿಕೋತ್ಸವ ಆಚರಿಸಲಾಯಿತು.

ಸಹಕಾರಿಯ ಹಳದಿಪುರ ಶಾಖೆಯು ಶುಭಾರಂಭಗೊಂಡು ಒಂದು ವರ್ಷ ಪೂರೈಸಿ ವಾರ್ಷಿಕ ಉತ್ಸವವನ್ನು ಸರಳ ರೀತಿಯಲ್ಲಿ ನಿನ್ನೆ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ .ಜಿ.ಶಂಕರ್ ಸರ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕರು ಶಾಖೆಯು ಹೊಂದಿರುವ ಠೇವಣಿ 1.49 ಕೋಟಿ, ಸಾಲ 1.61 ಕೋಟಿ ನೀಡಿರುವುದನ್ನು ಹಾಗೂ ಪಿಗ್ಮಿ ಸಂಗ್ರಹಕರಣೆ, ಕೋರ್ಡಿನೇಟರ್‌ಗಳು ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲ, ಇತರೆ ಭದ್ರತಾ ಸಾಲಗಳು ಮತ್ತು ಶಾಖೆಯ ಒಟ್ಟಾರೆ ಪ್ರಗತಿಯ ವರದಿಯನ್ನು ಸಭೆಯ ಮುಂದಿಟ್ಟರು.

#
#
#

ಸಹಕಾರಿಯ 17ನೇ ಶಾಖೆಯ ಶುಭಾರಂಭ, ಸೊರಬ

ಸಹಕಾರಿಯ 17ನೇ ಶಾಖೆಯ ಶುಭಾರಂಭ, ಸೊರಬ (ಶಿವಮೊಗ್ಗ ಜಿಲ್ಲೆ), ದಿನಾಂಕ, 10.05.2024 .


ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ...
#
#
#

ಗಣ್ಯರಿಗೆ ಸನ್ಮಾನಿಸಿದ ಕ್ಷಣಗಳು

ಗಣ್ಯರಿಗೆ ಸನ್ಮಾನ 20 ಏಪ್ರಿಲ್, 2024

ಮಾಹಾಲಕ್ಷ್ಮಿ ಕೋ ಆಪರೇಟಿವ್ ಉಡುಪಿ ಇವರು ನಮ್ಮ ಸಂಸ್ಥೆಗೆ ಆಗಮಿಸಿದಾಗ ಗಣ್ಯರಿಗೆ ಸನ್ಮಾನಿಸಿದ ಕ್ಷಣಗಳು.

#
#
#

ಕೋರ್ಡಿನೇಟರ್ FO-2 ಗಳ ಪ್ರಗತಿ ಪರೀಶಿಲನಾ ಸಭೆ.

ಪ್ರಧಾನ ಕಛೇರಿಯಲ್ಲಿ ನೆಡೆದ ಕೋರ್ಡಿನೇಟರ್ FO-2 ಗಳ ಪ್ರಗತಿ ಪರೀಶಿಲನಾ ಸಭೆ.

#
#

ಶಾಖಾ ವ್ಯವಸ್ಥಾಪಕರ ಪ್ರಗತಿ ಪರಿಶೀಲನಾ ಸಭೆ

ಪ್ರಧಾನ ಕಛೇರಿಯಲ್ಲಿ ನೆಡೆದ ಎಲ್ಲಾ ಶಾಖಾ ವ್ಯವಸ್ಥಾಪಕರ ಪ್ರಗತಿ ಪರಿಶೀಲನಾ ಸಭೆ.

#
#

ಹೊಸ ವರ್ಷದ ಕ್ಯಾಲೆಂಡರ್ ಅನಾವರಣ

ಸಭೆ 01 ಜನವರಿ, 2024

ರಾಜ್ಯ ಸೌಹಾರ್ದ ಸಹಕಾರಿ ದಿನ ಹಾಗು ಹೊಸ ವರ್ಷದ ಕ್ಯಾಲೆಂಡರ್ ಅನಾವರಣ ಮಾನ್ಯ ಅಧ್ಯಕ್ಷರು ಹಾಗು ಪ್ರಧಾನ ಕಛೇರಿ ಹೊನ್ನಾವರ.

#
#
#

ತಾಲೂಕ ಸೌಹಾರ್ದ ಸಹಕಾರಿಗಳ ಕ್ಲಸ್ಟರ್ ಮಟ್ಟದ ಸಭೆ

ಉತ್ತರ ಕನ್ನಡ ಜಿಲ್ಲಾ ಹೊನ್ನಾವರ ತಾಲೂಕ ಸೌಹಾರ್ದ ಸಹಕಾರಿಗಳ ಕ್ಲಸ್ಟರ್ ಮಟ್ಟದ ಸಭೆಯನ್ನು, 27-11-2023 ಇಂದು ಹೊನ್ನಾವರದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಈ ಸಭೆಗೆ ಬಂದಿರುವ ಸಂಯುಕ್ತ ಸಹಕಾರಿ ಸನ್ಮಾನ್ಯ ನಿರ್ದೇಶಕರು ಹಾಗೂ ಉತ್ತರ ಕನ್ನಡ ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷರಾದ ಮಾನ್ಯ ಶ್ರೀ ಮೋಹನ್ ದಾಸ್ ನಾಯಕ್ ಅವರಿಗೆ ಸಾಲು ಹೋದಿಸಿ ಗೌರವ ಸಮರ್ಪಣೆಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಸಂಪರ್ಕಾಧಿಕಾರಿಗಳಾದ ಶ್ರೀ ಸಂತೋಷ್ ಸರ್ ಗೆ ಗೌರವಿಸಲಾಯಿತು

ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 18 ಶಾಖೆಗಳು

Contact Us