ಜೆಪಿಎ (ಜನತಾ ವೈಯಕ್ತಿಕ ಅಪಘಾತ ಪರಿಹಾರ ಯೋಜನೆ) ಸೌಲಭ್ಯದ ಉಳಿತಾಯ ಖಾತೆ
1. ಖಾತೆಯ ಪ್ರಾರಂಭಿಕ ಕನಿಷ್ಠ ಶಿಲ್ಕು ರೂ.1,000/-(ರೂಪಾಯಿ ಒಂದು ಸಾವಿರ ಮಾತ್ರ)
2. ಖಾತೆ ತೆರೆದ ನಂತರ ಮೂರು ವರ್ಷಗಳವರೆಗೆ ಖಾತೆಯನ್ನು ರದ್ದುಗೊಳಿಸಲು ಹಾಗೂ ಖಾತೆಯಲ್ಲಿನ ಶಿಲ್ಕು ರೂ.1,000/- ಕ್ಕಿಂತ ಕಡಿಮೆ ಮಾಡಲು ಬರುವದಿಲ್ಲ.
3. ಮೂರು ವರ್ಷಗಳ ನಂತರ ಖಾತೆ ಮುಕ್ತಾಯಗೊಳಿಸುವದಿದ್ದರೆ ರೂ.100/- ಶುಲ್ಕ ವಿಧಿಸಲಾಗುವದು.
4. ಖಾತೆದಾರರಿಗೆ ಉಳಿತಾಯ ಖಾತೆಯಲ್ಲಿನ ಶಿಲ್ಕು ಹಣಕ್ಕೆ ಬಡ್ಡಿಯು ದೊರೆಯುತ್ತದೆ.
5. ಖಾತೆದಾರರಿಗೆ ರೂ.1,00,000/- (ರೂಪಾಯಿ ಒಂದು ಲಕ್ಷ ಮಾತ್ರ) ಆಕಸ್ಮಿಕ ಅಪಘಾತ ಪರಿಹಾರ ಸೌಲಭ್ಯ ನೀಡಲಾಗುವದು.
6. ಸದ್ರಿ ಯೋಜನೆಯ ರಕಂನ್ನು ಪ್ರತಿ ವರ್ಷ ಸಹಕಾರಿಯೇ ಭರಿಸುತ್ತದೆ ಹಾಗೂ ಯಾವುದೇ ಕಾರಣಕ್ಕೆ ಖಾತೆದಾರರ ಖಾತೆಗೆ ಖರ್ಚನ್ನು ಹಾಕಲಾಗುವದಿಲ್ಲ.
7. ಖಾತೆ ಪ್ರಾರಂಭಿಸುವಾಗ ಇತ್ತೀಚಿನ ಎರಡು ಭಾವಚಿತ್ರ ಹಾಗೂ ವಿಳಾಸ ಮತ್ತು ವಯಸ್ಸಿನ ಬಗ್ಗೆ ಪುರಾವೆ ನೀಡತಕ್ಕದ್ದು.
ಸದ್ರಿ ಜನತಾ ವೈಯಕ್ತಿಕ ಅಪಘಾತ ಪರಿಹಾರ ಯ ನಿಯಮ ಹಾಗೂ ಶರ್ತುಗಳು ಈ ಕೆಳಗಿನಂತಿದೆ.
1) ಯೋಜನೆ ಮುಖ್ಯಾಂಶಗಳು :
1.1) 10 ರಿಂದ 70 ವರ್ಷ ಪ್ರಾಯದ ಒಳಗಿನ ಯಾವುದೇ ವ್ಯಕ್ತಿ (ವೃತ್ತಿ, ಲಿಂಗ ಅಥವಾ ಉದ್ಯೋಗ ತಾರತಮ್ಯವಿಲ್ಲದೆ) ಈ ಯೋಜನೆ ಅಡಿಯಲ್ಲಿ ಒಳ ಪಡಬಹುದು.
1.2) ಈ ಪರಿಹಾರ ವ್ಯಾಪ್ತಿಯು ವಿಶ್ವದಾದ್ಯಂತ ಒಳಗೊಂಡಿರುತ್ತದೆ.
1.3) ಈ ಪರಿಹಾರದ ಅವಧಿ ಒಂದು ವರ್ಷ ಆಗಿರುತ್ತದೆ.
2) ಯೋಜನೆಯ ವ್ಯಾಪ್ತಿ :
ಈ ಯೋಜನೆಯು ಅಪಘಾತದಿಂದ ನಿರ್ದಿಷ್ಟವಾಗಿ ಮತ್ತು ನೇರವಾಗಿ ಆದ ಬಾಹ್ಯ , ಬಲವಂತದ ಹಾಗೂ ಗೋಚರಿಸುವ ಕಾರಣಗಳಿಂದ ಉಂಟಾದ ಮರಣ ಅಥವಾ ಅಶಕ್ತತೆಗೆ (ದೈಹಿಕ ಗಾಯಗಳು ಉಂಟಾಗಿ ಒಂದು ವರ್ಷದ ಒಳಗೆ) ಪರಿಹಾರ ನೀಡುತ್ತದೆ.
2.1) ಅಪಘಾತದಿಂದ ಉಂಟಾದ ಮರಣ 100% ಪರಿಹಾರ ಮೊತ್ತ
2.2) ಅಪಘಾತದಿಂದ ಉಂಟಾದ ಸಂಪೂರ್ಣ ಶಾಶ್ವತ ಅಶಕ್ತತೆ 100% ಪರಿಹಾರ ಮೊತ್ತ
2.3) ಎರಡೂ ಕೈ ಕಾಲುಗಳ ನಷ್ಟ, ಒಂದು ಕಣ್ಣು ಮತ್ತು ಒಂದು ಕೈ/ಕಾಲು ಅಥವಾ ಎರಡೂ ಕಣ್ಣುಗಳು 100% ಪರಿಹಾರ ಮೊತ್ತ
2.4) ಒಂದು ಕಣ್ಣು ಅಥವಾ ಒಂದು ಕೈ/ಕಾಲಿನ ನಷ್ಟ 50% ಪರಿಹಾರ ಮೊತ್ತ
ದೃಷ್ಟಿ ಹೀನತೆಯ ಸಂದರ್ಭದಲ್ಲಿ ಅಗತ್ಯವೆನಿಸಿದರೆ ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆಯನ್ನು ಸಂಸ್ಥೆಯ ಯೋಜನೆ ಅಡಿಯಲ್ಲಿ ಭರಿಸಲಾಗುವದು.
3) ನಿರಾಕರಣೆಗಳು :
3.1) ಪ್ರಕೃತ ಇರುವ ಯಾವುದೇ ಅಶಕ್ತತೆಗಳು
3.2) ಅಪೇಕ್ಷಿಸಿ ಸ್ವತಃ ಮಾಡಿಕೊಂಡ ಗಾಯಗಳಿಂದ ಉಂಟಾದ ಮರಣ, ಗಾಯಗಳು ಅಥವಾ ಅಶಕ್ತತೆ ಅಥವಾ ಆತ್ಮಹತ್ಯೆ ಅಥವಾ ಆತ್ಮಹತ್ಯಾ ಪ್ರಯತ್ನ
3.3) ಮಾದಕದ್ರವ್ಯಗಳ ಅಮಲಿನಿಂದ ಉಂಟಾದ ಅಶಕ್ತತೆ ಅಥವಾ ಮರಣ
3.4) ರೇಸಿಂಗ್, ಶೂಟಿಂಗ್, ಶಿಕಾರಿ, ಪರ್ವತಾರೋಹಣ, ಐಸ್‍ಹಾಕಿ, ಚಳಿಗಾಲದ ಆಟಗಳಿಂದ ಉಂಟಾದ ಅಶಕ್ತತೆ ಅಥವಾ ಮರಣ
3.5) ಹುಚ್ಚುತನ, ಕಾನೂನು ಉಲ್ಲಂಘನೆ, ಯುದ್ಧ ಮತ್ತು ಸಂಬಂಧಪಟ್ಟ ಕಂಟಕಗಳು ಮತ್ತು ಪರಮಾಣು ಕಂಟಕಗಳಿಂದ ಉಂಟಾದ ಅಶಕ್ತತೆ ಅಥವಾ ಮರಣ
4) ಶರ್ತುಗಳು :
4.1) ಈ ಮೇಲೆ ವಿವರಿಸಿದ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಸಹಕಾರಿಯ ಪ್ರಧಾನ ಕಛೇರಿಗೆ ಯೋಜನೆದಾರರು ವ ನಾಮ ನಿರ್ದೇಶಿತ ವ್ಯಕ್ತಿಗಳು ಅಥವಾ ವಾರಸುದಾರರು ನಿಗದಿತ ಅವಧಿಯಲ್ಲಿ ತಿಳಿಸತಕ್ಕದ್ದು.
4.2) ಕಂಪನಿಗೆ ನಂಬಿಕೆಯಾಗುವಂತಹ ದಾಖಲೆಗಳನ್ನು ಒದಗಿಸಿದಲ್ಲಿ ಪರಿಹಾರದ ರಕಂನ್ನು ನಿರ್ಧರಿಸುತ್ತದೆ. ಅಲ್ಲದೇ ಸಾಕ್ಷ್ಯಾಧಾರಗಳನ್ನು ಒದಗಿಸಿದಲ್ಲಿ ಮಾತ್ರ ವರದಿಯನ್ನು 14 ದಿನಗಳ ಒಳಗೆ ಲಿಖಿತವಾಗಿ ನೀಡತಕ್ಕದ್ದಿರುತ್ತದೆ.
4.3) ಯಾವುದೇ ಬಡ್ಡಿಯನ್ನು ನೀಡಲಾಗುವದಿಲ್ಲ.
4.4) ಕಾನೂನುಬಾಹಿರ ಪರಿಹಾರ ಕೇಳಿದಲ್ಲಿ ಒದಗಿಸಲು ಬದ್ಧರಲ್ಲ.
4.5) ಪರಿಹಾರದ ಕುರಿತು ನಿಗದಿತ ಅವಧಿಯಲ್ಲಿ ದಾಖಲೆಗಳೊಂದಿಗೆ ನಿಗದಿಪಡಿಸಿದ ಫಾರಂನಲ್ಲಿ ಭರ್ತಿ ಮಾಡತಕ್ಕದ್ದು ಇರುತ್ತದೆ.
4.6) ಯಾವುದೇ ಪ್ರಕರಣ ದಾಖಲಾದಲ್ಲಿ ಅದನ್ನು ಕಂಪನಿ ನೇಮಿಸುವ ಪಂಚಾಯತದಾರರ ಸಮಕ್ಷಮ ಇತ್ಯರ್ಥವಾಗತಕ್ಕದ್ದು ಇರುತ್ತದೆ. ಪಂಚಾಯತದಾರರ ತೀರ್ಮಾನವೇ ಅಂತಿಮ. ಅಲ್ಲದೇ ಕ್ಲೇಮು ರಕಂ ಪರಿಹಾರ ಯೋಜನೆಯಲ್ಲಿ ಕಾಣಿಸಿದ ಹೆಚ್ಚಿನ ರಕಂಗೆ ಅನ್ವಯವಾಗುವದಿಲ್ಲ.
4.7) ನಿಗದಿತ ಅವಧಿಯಲ್ಲಿಯೇ ಪರಿಹಾರದ ರಕಂ ಕುರಿತು ಅರ್ಜಿ ಗುಜರಾಯಿಸಿ ಪರಿಹಾರ ಕೇಳತಕ್ಕದ್ದು. ತದನಂತರ ಬಂದ ಅರ್ಜಿ ಪರಿಗಣಿಸುವದಿಲ್ಲ.
4.8) ಅಪಘಾತ ಸಂಭವಿಸಿದ ಕೂಡಲೇ ಸಮೀಪದ ಪೋಲಿಸ್ ಠಾಣೆಗೆ ತಿಳಿಸತಕ್ಕದ್ದು ಹಾಗೂ ಎಫ್.ಐ.ಆರ್ ಪಡಯತಕ್ಕದ್ದು.
4.9) ಮರಣ ಸಂಭವಿಸಿದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಪಡೆಯತಕ್ಕದ್ದು.
4.10) ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ಹಾಗೂ ದಾಖಲೆಯ ಮೂಲಪ್ರತಿ ನೀಡತಕ್ಕದ್ದು.
4.11) ಯೋಜನೆಯ ಪರಿಹಾರ ಪಡೆಯಲು ಎಲ್ಲಾ ಸಂಬಂಧಪಟ್ಟ ದಾಖಲೆಗಳ ಮೂಲಪ್ರತಿ ಹಾಜರಪಡಿಸತಕ್ಕದ್ದು.
4.12) ಪರಿಹಾರ ನೀಡುವದು ವಿಮಾಕಂಪನಿಯ ವಿವೇಚನೆಗೆ ಒಳಪಟ್ಟಿದೆ. ಇದಕ್ಕೆ ಸಹಕಾರಿಯು ಜವಾಬ್ದಾರಿಯಲ್ಲ.
4.13) ಯೋಜನೆದಾರರ ನಾಮನಿರ್ದೇಶಿತರು ಮರಣಹೊಂದಿದ್ದರೆ ಅವರ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ನೀಡಲಾಗುವದು. ಈ ಬಗ್ಗೆ ಅವರು ಅಧಿಕೃತ ದಾಖಲೆ ನೀಡತಕ್ಕದ್ದು.
4.14) ಸದ್ರಿ ಯೋಜನೆಯ ಸಂಬಂಧಿಸಿದ ಎಲ್ಲಾ ವಿವರ ಹಾಗೂ ಶರ್ತುಗಳನ್ನು ಯೋಜನೆದಾರರು ತಮ್ಮ ನಾಮನಿರ್ದೇಶಿತರಿಗೆ ಹಾಗೂ ಕುಟುಂಬದವರಿಗೆ ತಿಳಿಸತಕ್ಕದ್ದು ಕಡ್ಡಾಯವಿರುತ್ತದೆ.
ಜೆಪಿಎ ಉಳಿತಾಯ ಖಾತೆ ತೆರೆಯುವಾಗ ಪಾಲಿಸಬೇಕಾದ ಅಂಶಗಳು
1. ರೂ.1,000/- ತೊಡಗಿಸುವದರ ಮೂಲಕ ಈ ಜೆಪಿಎ ಉಳಿತಾಯ ಖಾತೆ ತೆರೆದಲ್ಲಿ ರೂ.1,00,000/- ಮೊತ್ತದ ಉಚಿತ ಪರಿಹಾರ ಸೌಲಭ್ಯ ನೀಡಲಾಗುವದು. ಖಾತೆದಾರನ ವಯಸ್ಸು 05 ವರ್ಷದಿಂದ 70 ವರ್ಷದೊಳಗೆ ಇರತಕ್ಕದ್ದು.
2. ಖಾತೆದಾರನ ಇತ್ತೀಚಿನ ಎರಡು ಭಾವಚಿತ್ರ
3. ಖಾತೆದಾರನ ವಿಳಾಸದ ಪುರಾವೆಯ ಸ್ವ ದೃಢೀಕೃತ ನಕಲು (ರೇಷನ್ ಕಾರ್ಡ, ಎಲೆಕ್ಷನ್ ಕಾರ್ಡ, ಡ್ರೈವಿಂಗ್ ಲೈಸನ್ಸ್, ಪಾಸ್‍ಪೋರ್ಟ, ರಾಷ್ಟ್ರೀಕೃತ ಬ್ಯಾಂಕಿನ ಪಾಸ್‍ಬುಕ್, ರಹವಾಸಿ ಪ್ರಮಾಣಪತ್ರ)
4. ಖಾತೆದಾರನ ವಯಸ್ಸಿನ ಪುರಾವೆಯ ಸ್ವ ದೃಢೀಕೃತ ನಕಲು (ಎಲೆಕ್ಷನ್ ಕಾರ್ಡ, ಡ್ರೈವಿಂಗ್ ಲೈಸನ್ಸ್, ಪಾಸ್‍ಪೋರ್ಟ, ಶಾಲಾ ಟಿ.ಸಿ, ಬರ್ತ ಸರ್ಟಿಫಿಕೆಟ್, ಇನ್ಸುರನ್ಸ್ ಯೋಜನೆ, ಮಾಕ್ರ್ಸ ಕಾರ್ಡ, ಪಾನ್ ಕಾರ್ಡ)
5. ಖಾತೆದಾರನು ಖಾತೆ ತೆರೆದ ನಂತರ ಜೆಪಿಎ ನಿಯಮಾವಳಿ ಪ್ರತಿ ಹಾಗೂ ಪಾಸ್‍ಬುಕ್‍ನ್ನು ಸಹಕಾರಿಯ ಶಾಖೆಗೆ ಬಂದು ಸಹಿ ಮಾಡಿ ಪಡೆಯತಕ್ಕದ್ದು.
6. ಖಾತೆದಾರನು ಅಪ್ರಾಪ್ತ ವಯಸ್ಕನಾಗಿದ್ದರೆ
(ಅ) ಖಾತೆದಾರನ ವಯಸ್ಸಿನ ಪುರಾವೆಯ ನಕಲು (ಶಾಲಾ ಟಿ.ಸಿ., ಬರ್ತ ಸರ್ಟಿಫಿಕೆಟ್, ಮಾಕ್ರ್ಸ ಕಾರ್ಡ)
(ಬ) ಖಾತೆದಾರರ ಪಾಲಕರ ಅಥವಾ ಪೋಷಕರ ವಿಳಾಸದ ಪುರಾವೆಯ ಸ್ವ ದೃಢೀಕೃತ ನಕಲು (ಈ ಮೇಲಿನ ನಂ.3ರಲ್ಲಿ ತಿಳಿಸಿದಂತೆ)
ಸೂಚನೆ: ಈ ಯೋಜನಾ ಸೌಲಭ್ಯವು ಖಾತೆ ಪ್ರಾರಂಭವಾದ ಮುಂದಿನ ತಿಂಗಳಿನ 01ನೇ ತಾರೀಕಿನಿಂದ ಚಾಲ್ತಿಯಲ್ಲಿ ಬರುತ್ತದೆ.
ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 18 ಶಾಖೆಗಳು