ಮುನ್ನುಡಿ

ಶರಾವತಿ ನದಿಯ ಮುಖಜ ಪ್ರದೇಶ ಪ್ರಶಾಂತ ವಾತಾವರಣ, ಹೊನ್ನಿನ ಆವಾರವೆಂದೇ ಪ್ರಖ್ಯಾತವಾದ ಹೊನ್ನಾವರ. ಸುಪ್ರಸಿದ್ಧ ಕಾಳುಮೆಣಸಿನ ರಾಣಿ, ಅಬ್ಬಕ್ಕ ದೇವಿಯ ಆಡಳಿತಕ್ಕೊಳಪಟ್ಟ ಒಂದು ಕಾಲದ ಸುಪ್ರಸಿದ್ಧ ಬಂದರು ಮತ್ತು ಗೇರುಸೊಪ್ಪದ ನಡುವಿನ ಸಂಪರ್ಕ ಕೊಂಡಿಯೇ ಶರಾವತಿ ನದಿ. ಆಚೆ ಈಚೆ ದಡದಲ್ಲಿ ಸಮೃದ್ಧ ಕೃಷಿ ಹಾಗೂ ಮೀನುಗಾರಿಕೆ ಉದ್ಯೋಗವೇ ಪ್ರಮುಖವಾಗಿದೆ.

ಇಲ್ಲಿಯ ತೆಂಗು, ಅಡಿಕೆ, ಬಾಳೆ, ಭತ್ತ ಮತ್ತು ಕಬ್ಬು ಹಾಗೆಯೇ ಹೈನುಗಾರಿಕೆ ಇಲ್ಲಿಯ ಜನರ ಆರ್ಥಿಕ ಮೂಲವಾಗಿದೆ. ಸಮೃದ್ಧವಾದ ನಿಸರ್ಗ ನಿರ್ಮಿತ ಪರ್ವತ ಹಾಗೂ ಅರಣ್ಯ ಸಂಪತ್ತು, ಬೆಳೆ ಹಾಗೂ ಪರಿಸರಕ್ಕೆ ಪೂರಕವಾಗಿದೆ. ಇಲ್ಲಿಯ ಜನರ ಜೀವನ ಪದ್ಧತಿಯನ್ನು ಆಳವಾಗಿ ಅಭ್ಯಸಿಸಿದಾಗ ಎದ್ದು ಕಾಣುವದೇ ಆರ್ಥಿಕ ಸಮಸ್ಯೆ. ಸಾಕಷ್ಟು ಬ್ಯಾಂಕ್, ಸೇವಾ ಸಹಕಾರಿ ಸಂಘಗಳು ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೂ ತೀರಾ ಅವಶ್ಯಕ ಉದ್ದೇಶಗಳಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ಸಹಾಯ ಸಿಗದೇ ಅನೇಕ ಜನ ಸಮಸ್ಯೆಗೆ ಒಳಗಾಗುತ್ತಿರುವದನ್ನು ಗಮನಿಸಿ, ಅವಶ್ಯಕ ಉದ್ಯೋಗ ಅಭಿವೃದ್ದಿಗೆ ಪೂರಕ ಹಣಕಾಸಿನ ವ್ಯವಸ್ಥೆ ಹಾಗೂ ವ್ಯವಹಾರಕ್ಕೆ ಮಾರ್ಗದರ್ಶನ ನೀಡುವ ತೀರಾ ಅವಶ್ಯಕತೆಯನ್ನು ಮನಗಂಡು ಸಹಕಾರರಿ ಸಂಸ್ಥೆಯೊಂದನ್ನು ಪ್ರಾರಂಭಿಸುವದಾಗಿ ಸಮಾನ ಮನಸ್ಕರು ನಿರ್ಣಯಿಸಿ ಪ್ರಾರಂಭಿಸಿದ್ದು ಸೇಫ್ ಸ್ಟಾರ್ ಸಮೂಹ ಸಂಸ್ಥೆ.

ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 16 ಶಾಖೆಗಳು

Contact Us