ಜೀವನ ಮೌಲ್ಯ ನಿಧಿ


ಇದು ಸದಸ್ಯರ ಮರಣೋತ್ತರ ಪರಿಹಾರ ನೀಡುವ ಯೋಜನೆಯಾಗಿರುತ್ತದೆ.

ಶರ್ತುಗಳು :-

  • 1. ಈ ಯೋಜನೆಗೆ ಒಳಲ್ಪಡಲು ಕಡ್ಡಾಯವಾಗಿ ಸಹಕಾರಿಯ ಶೇರು ಸದಸ್ಯನಾಗಿರಬೇಕು.

  • 2. ಸಹಕಾರಿಯ ಸದಸ್ಯತ್ವ ನೋಂದಣಿ ಮಾಡುವಾಗ ಆಧಾರ ಕಾರ್ಡ ಮತ್ತು ವೋಟರ್ ಕಾರ್ಡ ಅಥವಾ ರೇಷನ್ ಕಾರ್ಡ/ಪಾನ್ ಕಾರ್ಡ/ಡ್ರೈವಿಂಗ್ ಲೈಸನ್ಸ್ ಹಾಗೂ ಎರಡು ಫೋಟೋ ನೀಡುವದು.

  • 3. ವಯಸ್ಸಿನ ನಿರ್ಬಂಧ
  • ಎ) ಸಾಲಗಾರ ಸದಸ್ಯರಿಗೆ
  • ವಯಸ್ಸು ಕನಿಷ್ಠ 18 ಗರಿಷ್ಠ 70 ವರ್ಷವರೆಗೆ ಅಥವಾ ಸಾಲ ಚುಕ್ತಾ ಆಗುವವರೆಗೆ ಯಾವುದು ಮೊದಲೋ ಅದು ಅನ್ವಯ ಆಗುತ್ತದೆ.

  • ಏ) ಇತರೆ ಸದಸ್ಯರಿಗೆ ವಯಸ್ಸು ಕನಿಷ್ಠ 18 ಗರಿಷ್ಠ 60 ವರ್ಷವರೆಗೆ ನೋಂದಣಿ, ನವೀಕರಣಗೊಳಿಸಿದಲ್ಲಿ 70ವರ್ಷವರೆಗೆ ಚಾಲ್ತಿಯಲ್ಲಿರುತ್ತದೆ.

  • 4. ಈ ಯೋಜನೆಗೆ ಸದಸ್ಯತ್ವ ಹೊಂದಲು ವಾರ್ಷಿಕ ವಂತಿಗೆ ರೂ250/- (ಕಾಲಕಾಲಕ್ಕೆ ಶುಲ್ಕವನ್ನು ಬದಲಾವಣೆ ಮಾಡಲು ಸಹಕಾರಿ ಅಧಿಕಾರ ಹೊಂದಿರುತ್ತದೆ). ಸದ್ರಿ ವಂತಿಗೆಯನ್ನು ಯಾವುದೇ ಕಾರಣಕ್ಕೂ ಪರತ್ ನೀಡಲಾಗುವದಿಲ್ಲ ಹಾಗೂ ಅದಕ್ಕೆ ಬಡ್ಡಿ ನೀಡಲಾಗುವದಿಲ್ಲ.

  • 5. ಸದ್ರಿ ಯೋಜನೆಯು ನೋಂದಣಿಯಾದ ದಿನದ ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತದೆ. ಆದರೆ ನೋಂದಣಿಯಾದ ದಿನದಿಂದ 6 (ಆರು) ತಿಂಗಳಿಗೂ ಮುಂಚೆ ಸದಸ್ಯನು ಹೃದಯಾಘಾತ ಹಾಗೂ ಅಪಘಾತದಿಂದ ಉಂಟಾದ ಮರಣ ಹೊರತುಪಡಿಸಿ ಉಳಿದ ಯಾವುದೇ ರೀತಿಯಿಂದ ಮರಣ ಹೊಂದಿದಲ್ಲಿ ಮರಣೋತ್ತರ ಪರಿಹಾರ ನೀಡಲಾಗುವದಿಲ್ಲ.

  • 6. ಸದ್ರಿ ಯೋಜನೆ ಅವಧಿ 1 (ಒಂದು) ವರ್ಷ ಆಗಿರುತ್ತದೆ. ವಾಯಿದೆ ಮೊದಲು ಅಥವಾ ವಾಯಿದೆ ದಿನಾಂಕದಿಂದ 15 ದಿನಗಳ ಒಳಗೆ ನಿಗದಿತ ಶುಲ್ಕವನ್ನು ಪಾವತಿಸಿ ನವೀಕರಣಗೊಳಿಸತಕ್ಕದ್ದು. ಒಂದು ವೇಳೆ ನವೀಕರಣಗೊಳಿಸದಿದ್ದಲ್ಲಿ ಈ ಯೋಜನೆಯಿಂದ ಸದ್ರಿ ಸದಸ್ಯರ ಹೆಸರು ಕಡಿಮೆಗೊಳಿಸಲ್ಪಡುತ್ತದೆ. ಈ ಹದಿನೈದು ದಿನ ನವೀಕರಣಗೊಳಿಸಲು ರಿಯಾಯಿತಿ ದಿನಗಳೇ ಹೊರತು ಈ ಅವಧಿಯಲ್ಲಿ ಸದಸ್ಯನು ಮರಣ ಹೊಂದಿದರೆ ಯಾವುದೇ ಪರಿಹಾರ ನೀಡಲಾಗುವದಿಲ್ಲ.

  • 7. ಸಾಲಗಾರ ಸದಸ್ಯರ ನಿಗದಿತ ಶುಲ್ಕವನ್ನು ವಾಯಿದೆ ದಿನಾಂಕದೊಳಗಡೆ ಸದ್ರಿ ಸದಸ್ಯರ ಸಾಲದ ಯಾ ಉಳಿತಾಯ ಖಾತೆಗೆ ಖರ್ಚು ಹಾಕಿ ನವೀಕರಣಗೊಳಿಸಲಾಗುವದು.

  • 8. ವಾರಸುದಾರರ ನಾಮ ನಿರ್ದೇಶನ ಕಡ್ಡಾಯ.

  • 9. ಪರಿಹಾರ ಮೊತ್ತ ಗರಿಷ್ಠ ರೂ50,000/-. ಒಂದು ವೇಳೆ ಸದ್ರಿ ಸದಸ್ಯನಿಂದ ಸಹಕಾರಿಗೆ ಯಾವುದಾದರೂ ಬರತಕ್ಕ ಬಾಕಿ ಇದ್ದಲ್ಲಿ ಅದನ್ನು ಮುರಿತಾಯ ಮಾಡಿಕೊಂಡು ಹೆಚ್ಚಿಗೆ ಉಳಿದಲ್ಲಿ ನಾಮನಿರ್ದೇಶಿತ ವ್ಯಕ್ತಿ ಅಥವಾ ವಾರಸುದಾರರಿಗೆ ನೀಡಲಾಗುವದು.

  • 10. ಈ ಯೋಜನೆಗೆ ಒಳಪಟ್ಟ ಸದಸ್ಯ ಮರಣ ಹೊಂದಿದಲ್ಲಿ ಮರಣ ಹೊಂದಿದ 30 ದಿನಗಳ ಒಳಗಡೆ ಸಹಕಾರಿಯ ನಿಗದಿತ ನಮೂನೆಯಲ್ಲಿ ಕ್ಲೇಮು ಫಾರ್ಮ ಸಲ್ಲಿಸತಕ್ಕದ್ದು.

  • 11. ನಾಮನಿರ್ದೇಶಿತ ವ್ಯಕ್ತಿ ಅಥವಾ ವಾರಸುದಾರರು ಪರಿಹಾರ ಪಡೆಯುವ ನಿಗದಿತ ಅರ್ಜಿಯೊಂದಿಗೆ, ಅರ್ಜಿಯಲ್ಲಿ ತಿಳಿಸಲಾದ ದಾಖಲೆಗಳನ್ನು ಕಡ್ಡಾಯವಾಗಿ ನೀಡತಕ್ಕದ್ದು.

  • 12. ಪರಿಹಾರ ಕೋರಿ ಬಂದ ಅರ್ಜಿಯೊಂದಿಗೆ ನಿಗದಿತ ದಾಖಲೆಗಳನ್ನು ಹಾಜರುಪಡಿಸಿ ಸರಿಯಾಗಿದ್ದಲ್ಲಿ, ಪರಿಶೀಲನೆ ಮಾಡಿ ಪರಿಹಾರವನ್ನು ನೀಡಲಾಗುವದು.

  • 13. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಹಾಗೂ ಶರ್ತುಗಳನ್ನು ಸದಸ್ಯ ತನ್ನ ನಾಮನಿರ್ದೇಶಿತರಿಗೆ ಹಾಗೂ ಕುಟುಂಬ ಸದಸ್ಯರಿಗೆ ಕಡ್ಡಾಯವಾಗಿ ತಿಳಿಸಿರತಕ್ಕದ್ದು.

  • 14. ಸಹಕಾರಿಯಲ್ಲಿ ಜೆಪಿಎ ಪರಿಹಾರ ಯೋಜನೆಯಲ್ಲಿ ನೋಂದಣಿಯಾಗಿದ್ದು ಅಪಘಾತದಿಂದ ಮರಣ ಹೊಂದಿದಲ್ಲಿ ಈ ಯೋಜನೆಯಲ್ಲಿ ಪರಿಹಾರ ನೀಡಲಾಗುವದಿಲ್ಲ.

  • 15. ಸದ್ರಿ ಜೀವನಮೌಲ್ಯ ಪರಿಹಾರ ಹಾಗೂ ಜೆಪಿಎ ಪರಿಹಾರ ಎರಡೂ ಯೋಜನೆ ಹೊಂದಿದವರಿಗೆ ಅವರ ಮರಣದ ಸ್ವರೂಪದ ಆಧಾರದ ಮೇಲೆ ಯಾವುದೇ ಒಂದು ರೀತಿಯ ಮರಣೋತ್ತರ ಪರಿಹಾರ ನೀಡಲಾಗುವದು.

  • 16. ನಿರಾಕರಣೆಗಳು
  • 1. ಅಪೇಕ್ಷಿಸಿ ಸ್ವತಃ ಮಾಡಿಕೊಂಡ ಗಾಯಗಳಿಂದ ಉಂಟಾದ ಮರಣ ಹಾಗೂ ಆತ್ಮಹತ್ಯೆ ಮರಣ
  • 2. ಮಾದಕ ದ್ರವ್ಯಗಳ ಅಮಲಿನಿಂದ ಉಂಟಾದ ಮರಣ
  • 3. ಪ್ರಕೃತಿ ವಿಕೋಪಗಳಿಂದ ಆದ ಮರಣ
  • 4. ಹುಚ್ಚುತನ, ಕಾನೂನು ಉಲ್ಲಂಘನೆ, ಯುದ್ಧ ಮತ್ತು ಸಂಬಂಧಪಟ್ಟ ಕಂಟಕಗಳು ಹಾಗೂ ಪರಮಾಣು ಕಂಟಕಗಳಿಂದ ಉಂಟಾದ ಮರಣ
  • 5. ಸದ್ರಿ ಯೋಜನೆಯ ಅರ್ಜಿ ದಿನಾಂಕದಂದು ಮಾರಣಾಂತಿಕ ಖಾಯಿಲೆ/ಗುಣಪಡಿಸಲಾಗದ ಖಾಯಿಲೆಯಿಂದ ಬಳಲುತ್ತಿದ್ದರೆ

ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 16 ಶಾಖೆಗಳು

Contact Us