ಜೆಪಿಎ (ಜನತಾ ವೈಯಕ್ತಿಕ ಅಪಘಾತ ಪರಿಹಾರ ಯೋಜನೆ) ಸೌಲಭ್ಯದ ಉಳಿತಾಯ ಖಾತೆ


  • 1. ಖಾತೆಯ ಪ್ರಾರಂಭಿಕ ಕನಿಷ್ಠ ಶಿಲ್ಕು ರೂ.1,000/-(ರೂಪಾಯಿ ಒಂದು ಸಾವಿರ ಮಾತ್ರ)
  • 2. ಖಾತೆ ತೆರೆದ ನಂತರ ಮೂರು ವರ್ಷಗಳವರೆಗೆ ಖಾತೆಯನ್ನು ರದ್ದುಗೊಳಿಸಲು ಹಾಗೂ ಖಾತೆಯಲ್ಲಿನ ಶಿಲ್ಕು ರೂ.1,000/- ಕ್ಕಿಂತ ಕಡಿಮೆ ಮಾಡಲು ಬರುವದಿಲ್ಲ.
  • 3. ಮೂರು ವರ್ಷಗಳ ನಂತರ ಖಾತೆ ಮುಕ್ತಾಯಗೊಳಿಸುವದಿದ್ದರೆ ರೂ.100/- ಶುಲ್ಕ ವಿಧಿಸಲಾಗುವದು.
  • 4. ಖಾತೆದಾರರಿಗೆ ಉಳಿತಾಯ ಖಾತೆಯಲ್ಲಿನ ಶಿಲ್ಕು ಹಣಕ್ಕೆ ಬಡ್ಡಿಯು ದೊರೆಯುತ್ತದೆ.
  • 5. ಖಾತೆದಾರರಿಗೆ ರೂ.1,00,000/- (ರೂಪಾಯಿ ಒಂದು ಲಕ್ಷ ಮಾತ್ರ) ಆಕಸ್ಮಿಕ ಅಪಘಾತ ಪರಿಹಾರ ಸೌಲಭ್ಯ ನೀಡಲಾಗುವದು.
  • 6. ಸದ್ರಿ ಯೋಜನೆಯ ರಕಂನ್ನು ಪ್ರತಿ ವರ್ಷ ಸಹಕಾರಿಯೇ ಭರಿಸುತ್ತದೆ ಹಾಗೂ ಯಾವುದೇ ಕಾರಣಕ್ಕೆ ಖಾತೆದಾರರ ಖಾತೆಗೆ ಖರ್ಚನ್ನು ಹಾಕಲಾಗುವದಿಲ್ಲ.
  • 7. ಖಾತೆ ಪ್ರಾರಂಭಿಸುವಾಗ ಇತ್ತೀಚಿನ ಎರಡು ಭಾವಚಿತ್ರ ಹಾಗೂ ವಿಳಾಸ ಮತ್ತು ವಯಸ್ಸಿನ ಬಗ್ಗೆ ಪುರಾವೆ ನೀಡತಕ್ಕದ್ದು.
  • ಸದ್ರಿ ಜನತಾ ವೈಯಕ್ತಿಕ ಅಪಘಾತ ಪರಿಹಾರ ಯ ನಿಯಮ ಹಾಗೂ ಶರ್ತುಗಳು ಈ ಕೆಳಗಿನಂತಿದೆ.

  • 1) ಯೋಜನೆ ಮುಖ್ಯಾಂಶಗಳು :
  • 1.1) 10 ರಿಂದ 70 ವರ್ಷ ಪ್ರಾಯದ ಒಳಗಿನ ಯಾವುದೇ ವ್ಯಕ್ತಿ (ವೃತ್ತಿ, ಲಿಂಗ ಅಥವಾ ಉದ್ಯೋಗ ತಾರತಮ್ಯವಿಲ್ಲದೆ) ಈ ಯೋಜನೆ ಅಡಿಯಲ್ಲಿ ಒಳ ಪಡಬಹುದು.
  • 1.2) ಈ ಪರಿಹಾರ ವ್ಯಾಪ್ತಿಯು ವಿಶ್ವದಾದ್ಯಂತ ಒಳಗೊಂಡಿರುತ್ತದೆ.
  • 1.3) ಈ ಪರಿಹಾರದ ಅವಧಿ ಒಂದು ವರ್ಷ ಆಗಿರುತ್ತದೆ.

  • 2) ಯೋಜನೆಯ ವ್ಯಾಪ್ತಿ :
  • ಈ ಯೋಜನೆಯು ಅಪಘಾತದಿಂದ ನಿರ್ದಿಷ್ಟವಾಗಿ ಮತ್ತು ನೇರವಾಗಿ ಆದ ಬಾಹ್ಯ , ಬಲವಂತದ ಹಾಗೂ ಗೋಚರಿಸುವ ಕಾರಣಗಳಿಂದ ಉಂಟಾದ ಮರಣ ಅಥವಾ ಅಶಕ್ತತೆಗೆ (ದೈಹಿಕ ಗಾಯಗಳು ಉಂಟಾಗಿ ಒಂದು ವರ್ಷದ ಒಳಗೆ) ಪರಿಹಾರ ನೀಡುತ್ತದೆ.
  • 2.1) ಅಪಘಾತದಿಂದ ಉಂಟಾದ ಮರಣ 100% ಪರಿಹಾರ ಮೊತ್ತ
  • 2.2) ಅಪಘಾತದಿಂದ ಉಂಟಾದ ಸಂಪೂರ್ಣ ಶಾಶ್ವತ ಅಶಕ್ತತೆ 100% ಪರಿಹಾರ ಮೊತ್ತ
  • 2.3) ಎರಡೂ ಕೈ ಕಾಲುಗಳ ನಷ್ಟ, ಒಂದು ಕಣ್ಣು ಮತ್ತು ಒಂದು ಕೈ/ಕಾಲು ಅಥವಾ ಎರಡೂ ಕಣ್ಣುಗಳು 100% ಪರಿಹಾರ ಮೊತ್ತ
  • 2.4) ಒಂದು ಕಣ್ಣು ಅಥವಾ ಒಂದು ಕೈ/ಕಾಲಿನ ನಷ್ಟ 50% ಪರಿಹಾರ ಮೊತ್ತ
  • ದೃಷ್ಟಿ ಹೀನತೆಯ ಸಂದರ್ಭದಲ್ಲಿ ಅಗತ್ಯವೆನಿಸಿದರೆ ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆಯನ್ನು ಸಂಸ್ಥೆಯ ಯೋಜನೆ ಅಡಿಯಲ್ಲಿ ಭರಿಸಲಾಗುವದು.

  • 3) ನಿರಾಕರಣೆಗಳು :
  • 3.1) ಪ್ರಕೃತ ಇರುವ ಯಾವುದೇ ಅಶಕ್ತತೆಗಳು
  • 3.2) ಅಪೇಕ್ಷಿಸಿ ಸ್ವತಃ ಮಾಡಿಕೊಂಡ ಗಾಯಗಳಿಂದ ಉಂಟಾದ ಮರಣ, ಗಾಯಗಳು ಅಥವಾ ಅಶಕ್ತತೆ ಅಥವಾ ಆತ್ಮಹತ್ಯೆ ಅಥವಾ ಆತ್ಮಹತ್ಯಾ ಪ್ರಯತ್ನ
  • 3.3) ಮಾದಕದ್ರವ್ಯಗಳ ಅಮಲಿನಿಂದ ಉಂಟಾದ ಅಶಕ್ತತೆ ಅಥವಾ ಮರಣ
  • 3.4) ರೇಸಿಂಗ್, ಶೂಟಿಂಗ್, ಶಿಕಾರಿ, ಪರ್ವತಾರೋಹಣ, ಐಸ್‍ಹಾಕಿ, ಚಳಿಗಾಲದ ಆಟಗಳಿಂದ ಉಂಟಾದ ಅಶಕ್ತತೆ ಅಥವಾ ಮರಣ
  • 3.5) ಹುಚ್ಚುತನ, ಕಾನೂನು ಉಲ್ಲಂಘನೆ, ಯುದ್ಧ ಮತ್ತು ಸಂಬಂಧಪಟ್ಟ ಕಂಟಕಗಳು ಮತ್ತು ಪರಮಾಣು ಕಂಟಕಗಳಿಂದ ಉಂಟಾದ ಅಶಕ್ತತೆ ಅಥವಾ ಮರಣ

  • 4) ಶರ್ತುಗಳು :
  • 4.1) ಈ ಮೇಲೆ ವಿವರಿಸಿದ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಸಹಕಾರಿಯ ಪ್ರಧಾನ ಕಛೇರಿಗೆ ಯೋಜನೆದಾರರು ವ ನಾಮ ನಿರ್ದೇಶಿತ ವ್ಯಕ್ತಿಗಳು ಅಥವಾ ವಾರಸುದಾರರು ನಿಗದಿತ ಅವಧಿಯಲ್ಲಿ ತಿಳಿಸತಕ್ಕದ್ದು.
  • 4.2) ಕಂಪನಿಗೆ ನಂಬಿಕೆಯಾಗುವಂತಹ ದಾಖಲೆಗಳನ್ನು ಒದಗಿಸಿದಲ್ಲಿ ಪರಿಹಾರದ ರಕಂನ್ನು ನಿರ್ಧರಿಸುತ್ತದೆ. ಅಲ್ಲದೇ ಸಾಕ್ಷ್ಯಾಧಾರಗಳನ್ನು ಒದಗಿಸಿದಲ್ಲಿ ಮಾತ್ರ ವರದಿಯನ್ನು 14 ದಿನಗಳ ಒಳಗೆ ಲಿಖಿತವಾಗಿ ನೀಡತಕ್ಕದ್ದಿರುತ್ತದೆ.
  • 4.3) ಯಾವುದೇ ಬಡ್ಡಿಯನ್ನು ನೀಡಲಾಗುವದಿಲ್ಲ.
  • 4.4) ಕಾನೂನುಬಾಹಿರ ಪರಿಹಾರ ಕೇಳಿದಲ್ಲಿ ಒದಗಿಸಲು ಬದ್ಧರಲ್ಲ.
  • 4.5) ಪರಿಹಾರದ ಕುರಿತು ನಿಗದಿತ ಅವಧಿಯಲ್ಲಿ ದಾಖಲೆಗಳೊಂದಿಗೆ ನಿಗದಿಪಡಿಸಿದ ಫಾರಂನಲ್ಲಿ ಭರ್ತಿ ಮಾಡತಕ್ಕದ್ದು ಇರುತ್ತದೆ.
  • 4.6) ಯಾವುದೇ ಪ್ರಕರಣ ದಾಖಲಾದಲ್ಲಿ ಅದನ್ನು ಕಂಪನಿ ನೇಮಿಸುವ ಪಂಚಾಯತದಾರರ ಸಮಕ್ಷಮ ಇತ್ಯರ್ಥವಾಗತಕ್ಕದ್ದು ಇರುತ್ತದೆ. ಪಂಚಾಯತದಾರರ ತೀರ್ಮಾನವೇ ಅಂತಿಮ. ಅಲ್ಲದೇ ಕ್ಲೇಮು ರಕಂ ಪರಿಹಾರ ಯೋಜನೆಯಲ್ಲಿ ಕಾಣಿಸಿದ ಹೆಚ್ಚಿನ ರಕಂಗೆ ಅನ್ವಯವಾಗುವದಿಲ್ಲ.
  • 4.7) ನಿಗದಿತ ಅವಧಿಯಲ್ಲಿಯೇ ಪರಿಹಾರದ ರಕಂ ಕುರಿತು ಅರ್ಜಿ ಗುಜರಾಯಿಸಿ ಪರಿಹಾರ ಕೇಳತಕ್ಕದ್ದು. ತದನಂತರ ಬಂದ ಅರ್ಜಿ ಪರಿಗಣಿಸುವದಿಲ್ಲ.
  • 4.8) ಅಪಘಾತ ಸಂಭವಿಸಿದ ಕೂಡಲೇ ಸಮೀಪದ ಪೋಲಿಸ್ ಠಾಣೆಗೆ ತಿಳಿಸತಕ್ಕದ್ದು ಹಾಗೂ ಎಫ್.ಐ.ಆರ್ ಪಡಯತಕ್ಕದ್ದು.
  • 4.9) ಮರಣ ಸಂಭವಿಸಿದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಪಡೆಯತಕ್ಕದ್ದು.
  • 4.10) ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ಹಾಗೂ ದಾಖಲೆಯ ಮೂಲಪ್ರತಿ ನೀಡತಕ್ಕದ್ದು.
  • 4.11) ಯೋಜನೆಯ ಪರಿಹಾರ ಪಡೆಯಲು ಎಲ್ಲಾ ಸಂಬಂಧಪಟ್ಟ ದಾಖಲೆಗಳ ಮೂಲಪ್ರತಿ ಹಾಜರಪಡಿಸತಕ್ಕದ್ದು.
  • 4.12) ಪರಿಹಾರ ನೀಡುವದು ವಿಮಾಕಂಪನಿಯ ವಿವೇಚನೆಗೆ ಒಳಪಟ್ಟಿದೆ. ಇದಕ್ಕೆ ಸಹಕಾರಿಯು ಜವಾಬ್ದಾರಿಯಲ್ಲ.
  • 4.13) ಯೋಜನೆದಾರರ ನಾಮನಿರ್ದೇಶಿತರು ಮರಣಹೊಂದಿದ್ದರೆ ಅವರ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ನೀಡಲಾಗುವದು. ಈ ಬಗ್ಗೆ ಅವರು ಅಧಿಕೃತ ದಾಖಲೆ ನೀಡತಕ್ಕದ್ದು.
  • 4.14) ಸದ್ರಿ ಯೋಜನೆಯ ಸಂಬಂಧಿಸಿದ ಎಲ್ಲಾ ವಿವರ ಹಾಗೂ ಶರ್ತುಗಳನ್ನು ಯೋಜನೆದಾರರು ತಮ್ಮ ನಾಮನಿರ್ದೇಶಿತರಿಗೆ ಹಾಗೂ ಕುಟುಂಬದವರಿಗೆ ತಿಳಿಸತಕ್ಕದ್ದು ಕಡ್ಡಾಯವಿರುತ್ತದೆ.


ಜೆಪಿಎ ಉಳಿತಾಯ ಖಾತೆ ತೆರೆಯುವಾಗ ಪಾಲಿಸಬೇಕಾದ ಅಂಶಗಳು


  • 1. ರೂ.1,000/- ತೊಡಗಿಸುವದರ ಮೂಲಕ ಈ ಜೆಪಿಎ ಉಳಿತಾಯ ಖಾತೆ ತೆರೆದಲ್ಲಿ ರೂ.1,00,000/- ಮೊತ್ತದ ಉಚಿತ ಪರಿಹಾರ ಸೌಲಭ್ಯ ನೀಡಲಾಗುವದು. ಖಾತೆದಾರನ ವಯಸ್ಸು 05 ವರ್ಷದಿಂದ 70 ವರ್ಷದೊಳಗೆ ಇರತಕ್ಕದ್ದು.

  • 2. ಖಾತೆದಾರನ ಇತ್ತೀಚಿನ ಎರಡು ಭಾವಚಿತ್ರ

  • 3. ಖಾತೆದಾರನ ವಿಳಾಸದ ಪುರಾವೆಯ ಸ್ವ ದೃಢೀಕೃತ ನಕಲು (ರೇಷನ್ ಕಾರ್ಡ, ಎಲೆಕ್ಷನ್ ಕಾರ್ಡ, ಡ್ರೈವಿಂಗ್ ಲೈಸನ್ಸ್, ಪಾಸ್‍ಪೋರ್ಟ, ರಾಷ್ಟ್ರೀಕೃತ ಬ್ಯಾಂಕಿನ ಪಾಸ್‍ಬುಕ್, ರಹವಾಸಿ ಪ್ರಮಾಣಪತ್ರ)

  • 4. ಖಾತೆದಾರನ ವಯಸ್ಸಿನ ಪುರಾವೆಯ ಸ್ವ ದೃಢೀಕೃತ ನಕಲು (ಎಲೆಕ್ಷನ್ ಕಾರ್ಡ, ಡ್ರೈವಿಂಗ್ ಲೈಸನ್ಸ್, ಪಾಸ್‍ಪೋರ್ಟ, ಶಾಲಾ ಟಿ.ಸಿ, ಬರ್ತ ಸರ್ಟಿಫಿಕೆಟ್, ಇನ್ಸುರನ್ಸ್ ಯೋಜನೆ, ಮಾಕ್ರ್ಸ ಕಾರ್ಡ, ಪಾನ್ ಕಾರ್ಡ)

  • 5. ಖಾತೆದಾರನು ಖಾತೆ ತೆರೆದ ನಂತರ ಜೆಪಿಎ ನಿಯಮಾವಳಿ ಪ್ರತಿ ಹಾಗೂ ಪಾಸ್‍ಬುಕ್‍ನ್ನು ಸಹಕಾರಿಯ ಶಾಖೆಗೆ ಬಂದು ಸಹಿ ಮಾಡಿ ಪಡೆಯತಕ್ಕದ್ದು.

  • 6. ಖಾತೆದಾರನು ಅಪ್ರಾಪ್ತ ವಯಸ್ಕನಾಗಿದ್ದರೆ
  • (ಅ) ಖಾತೆದಾರನ ವಯಸ್ಸಿನ ಪುರಾವೆಯ ನಕಲು (ಶಾಲಾ ಟಿ.ಸಿ., ಬರ್ತ ಸರ್ಟಿಫಿಕೆಟ್, ಮಾಕ್ರ್ಸ ಕಾರ್ಡ)
  • (ಬ) ಖಾತೆದಾರರ ಪಾಲಕರ ಅಥವಾ ಪೋಷಕರ ವಿಳಾಸದ ಪುರಾವೆಯ ಸ್ವ ದೃಢೀಕೃತ ನಕಲು (ಈ ಮೇಲಿನ ನಂ.3ರಲ್ಲಿ ತಿಳಿಸಿದಂತೆ)
  • ಸೂಚನೆ: ಈ ಯೋಜನಾ ಸೌಲಭ್ಯವು ಖಾತೆ ಪ್ರಾರಂಭವಾದ ಮುಂದಿನ ತಿಂಗಳಿನ 01ನೇ ತಾರೀಕಿನಿಂದ ಚಾಲ್ತಿಯಲ್ಲಿ ಬರುತ್ತದೆ.

ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 16 ಶಾಖೆಗಳು

Contact Us